21-ಸೆಪ್ಟೆಂಬರ್-2022) ನಾರಾವಿ ಪ್ರೌಢಶಾಲೆ, ನಾರಾವಿ – ಮತ್ತು ಸಂತ ಪೌಲರ ಹಿರಿಯ ಪ್ರಾಥಮಿಕ ಶಾಲೆಯ ಜಂಟಿ ಆಶ್ರಯದಲ್ಲಿ ಪೋಷಣ್ ಅಭಿಯಾನ್ ಪ್ರಯುಕ್ತ, ಪೋಷಣ ಮಾಸಾಚರಣೆಯ ಅಂಗವಾಗಿ ಮಕ್ಕಳಿಂದ ತರಕಾರಿ ಮತ್ತು ಹಣ್ಣುಗಳ ಪ್ರದರ್ಶನಾ ಮೇಳ, ಆಹಾರ ಘಟಕಗಳ ಮಹತ್ವದ ಜಾಗೃತಿ ಮತ್ತು ಅರಿವು ಮೂಡಿಸುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಅಕ್ಷರ ದಾಸೋಹ ಸಹಾಯಕ ನಿರ್ದೇಶಕಿಯವರಾದ ಶ್ರೀಮತಿ ತಾರಕೇಸರಿ – ಇವರು ಮುಖ್ಯ ಅತಿಥಿಗಳಾಗಿ ಹಾಗೂ ಪ್ರೇರಕರಾಗಿ ನಮ್ಮ ಜೊತೆಗಿದ್ದರು. ಶಾಲಾ ಸಂಚಾಲಕರಾದ ವಂ. ಸೈಮನ್ ಡಿಸೋಜಾ ರವರು ಅಧ್ಯಕ್ಷತೆ ವಹಿಸಿದರು. ಪ್ರೌಢಶಾಲಾ ಮುಖ್ಯ ಶಿಕ್ಷಕಿಯವರಾದ ಶ್ರೀಮತಿ ಲಿಡ್ವಿನ್ ಲೋಬೋ ಮತ್ತು ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿಯವರಾದ ಶ್ರೀಮತಿ ಸೋಫಿಯಾ ಫೆರ್ನಾಂಡಿಸ್ ರವರು ಉಪಸ್ಥಿತರಿದ್ದರು. ಶಿಕ್ಷಕಿ|| ಶ್ರೀಮತಿ ಲಿಲ್ಲಿ ಪಾಯ್ಸ್ ರವರು ಸ್ವಾಗತಿಸಿದರು. ಶಿಕ್ಷಕ|| ಶ್ರೀ ಜಾನ್ಸನ್ ರವರು ಪೋಷಣಾ ಅಭಿಯಾನದ ಮಹತ್ವದ ಬಗ್ಗೆ ಮಾತನಾಡಿದರು. ಶಿಕ್ಷಕಿ|| ಶ್ರೀಮತಿ ಜಾನೆಟ್ ರವರು ವಂದಿಸಿದರು. ಶಿಕ್ಷಕ|| ಶ್ರೀ ಗೋಪಾಲಕೃಷ್ಣ ತುಳುಪುಳೆಯವರು ಕಾರ್ಯಕ್ರಮ ನಿರ್ವಹಿಸಿದರು.