23-Sept-2022 ರಾಷ್ಟ್ರೀಯ ಪೋಷಣ್ ಅಭಿಯಾನ್ ಪ್ರಯುಕ್ತ ನಾರಾವಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಲ್ಲಿರುವ ಕೌಶಲ-ಅಭಿರುಚಿ-ಜಾಗೃತಿ ಯನ್ನು ಪ್ರೇರೇಪಿಸುವ ಸಲುವಾಗಿ ಬೆಂಕಿಯಿಲ್ಲದ ಅಡುಗೆ (ಸ್ಪರ್ಧೆ) ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಮುಂಚಿತವಾಗಿಯೇ ತಿಳಿಸಿರುವಂತೆ, ವಿದ್ಯಾರ್ಥಿಗಳು ಪಂಗಡದ ಹೆಸರನ್ನು ಮೊದಲೇ ನೋಂದಾಯಿಸಿಕೊಂಡು, ಕೊಟ್ಟಿರುವ ಸ್ಥಳಾವಕಾಶ ಮತ್ತು ಸಮಯಾವಕಾಶವನ್ನು ಬಳಸಿ, ತಾವೇ ತಂದಿರುವ ಆಹಾರ ವಸ್ತುಗಳನ್ನು ಸಂಯೋಜಿಸಿ, ಖಾದ್ಯ, ಪಾನೀಯಗಳನ್ನು ತಯಾರಿಸಿದರು.
ವಿವಿಧ ಘಟಕಾಂಶಗಳನ್ನು ತುರಿದು, ಬೆರೆಸಿ, ರುಚಿಯನ್ನು ಪರಿಶೀಲಿಸಿ ಕೌಶಲ್ಯ ವನ್ನು ಮೆರೆದರು.
ವೈವಿದ್ಯಮಯವಾಗಿ ರಚಿಸಿ, ರೂಪಿಸಿಕೊಂಡು, ತಾವೇ ಅದರ ಅಂದವನ್ನು ಮೊದಲು ಕಂಡು ಸಂಭ್ರಮಿಸಿದರು.
ಶಿಕ್ಷಕರು ಬಂದು ರುಚಿ ನೋಡಿ ಅಭಿನಂದಿಸಿದಾಗ, ಸಂಬ್ರಮಿಸಿ, ಹಿರಿ ಹಿರಿ ಹಿಗ್ಗಿದರು, ಖುಷಿ ಪಟ್ಟರು. ಇತರ ಸಹಪಾಠಿಗಳೊಂದಿಗೆ ತೋರಿಸಿ, ಹಂಚುತ್ತ ಸಂಭ್ರಮಿಸಿದರು.
ಶಿಕ್ಷಕರು ಸೂಕ್ತ ಮತ್ತು ಶುಚಿಯಾದ ಮತ್ತು ವ್ಯವಸ್ಥಿತ ಕ್ರಮದಲ್ಲಿ ತಯಾರಿಸಲು ನೀಡಿದ್ದ ಸೂಚನೆಗಳನ್ನು ಸರಿಯಾಗಿ ಪಾಲಿಸಿದರು.
ಅಂದವಾಗಿ ಮೂಡಿ ಬಂದ ಈ ಕಾರ್ಯಕ್ರಮದಲ್ಲಿ ಶಿಕ್ಷಕರೆಲ್ಲರೂ ಪಾಲ್ಗೊಂಡು, ತೀರ್ಪುದಾರರಾಗಿ, ಪ್ರಶಂಸಕರಾಗಿ ಮತ್ತು ಪ್ರೇರಕರಾಗಿ ಕಾರ್ಯನಿರತರಾದರು.
ವ್ಯವಸ್ಥಿತವಾಗಿ ನಡೆದ ಕಾರ್ಯವು ಮುಕ್ತಾಯಗೊಳ್ಳುತ್ತಿದ್ದಂತೆಯೇ, ಜಾತ್ರೆಯ ಗದ್ದಲವೋ ಎಂಬಂತಹ ಅಲ್ಪಾವಧಿಯ ಗೌಜಿಯು ತಕ್ಷಣವೇ ಸರಿದು, ವ್ಯವಸ್ಥಿತವಾಗಿ ಎಲ್ಲವನ್ನೂ ತೆರವುಗೊಳಿಸಿ ತಮ್ಮ ತಮ್ಮ ತರಗತಿ ಕೊಠಡಿಗೆ ತೆರಳಿ, ಮುಂದಿನ ಅವಧಿಗೆ ಸಿದ್ಧರಾದರು.
Super