History

ಸಂಸ್ಥೆ ಬೆಳೆದು ಬಂದ ದಾರಿ :

ನಾರಾವಿ ಪ್ರೌಢಶಾಲಾ ಆಡಳಿತವು ಮಂಗಳೂರು ಧರ್ಮ ಪ್ರಾಂತ್ಯದ ಕಥೊಲಿಕ್ ಶಿಕ್ಷಣ ಮಂಡಳಿಯ ಆಳ್ವಿಕೆಗೆ ಒಳಪಟ್ಟಿದ್ದು, ಮಂಗಳೂರು ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷರು ಈ ಶಿಕ್ಷಣ ಮಂಡಳಿಯ ಅಧ್ಯಕ್ಷರಾಗಿರುವರು, ಅವರಿಂದ ಸೂಚಿತರಾದ ಧರ್ಮಗುರುಗಳು ಕಥೊಲಿಕ್ ಶಿಕ್ಷಣ ಮಂಡಳಿಯ ಕಾರ್ಯದರ್ಶಿಯಾಗಿರುವರು, ಸಂತ ಅಂತೋನಿ ಚರ್ಚ್ ನ ಧರ್ಮ ಗುರುಗಳು ಕಥೊಲಿಕ್ ಶಿಕ್ಷಣ ಮಂಡಳಿಯ ಜೊತೆ ಕಾರ್ಯದರ್ಶಿಯಾಗಿದ್ದು, ಸಂತ ಅಂತೋನಿ ಶಿಕ್ಷಣ ಸಂಸ್ಥೆಗಳ ಸಂಚಾಲಕರಾಗಿರುತ್ತಾರೆ. ಇವರ ಸೂಕ್ತ ಮಾರ್ಗದರ್ಶನ ಹಾಗೂ ಮೇಲ್ವಿಚಾರಣೆಯಲ್ಲಿ ನಮ್ಮ ಪ್ರೌಢಶಾಲೆಯು ಪ್ರಗತಿಯ ಪಥದಲ್ಲಿ ಸಾಗುತ್ತಿದೆ.

ಶಾಲೆ ಆರಂಭವಾಗುವಾಗ ನಾರಾವಿಯ ಸನ್ನಿವೇಶ : ಮಲೆನಾಡ ಮಡಿಲಲ್ಲಿ ಅಭಿವೃದ್ಧಿ ಹೊಂದುತ್ತಿರುವ “ನಾರಾವಿ” ಎಂಬ ಈ ಹಳ್ಳಿಯು ಅತ್ಯಂತ ಹಿಂದುಳಿದ ಮಲೆನಾಡಪ್ರದೇಶಗಳಲ್ಲಿ ಒಂದೆನಿಸಿತ್ತು. ಪ್ರಸ್ತುತ ಪ್ರಗತಿ ಪಥದಲ್ಲಿರುವ ಈ ಹಳ್ಳಿಯು ಅನಾದಿ ಕಾಲದಿಂದಲೂ ಮಳೆಗಾಲದ 6 ತಿಂಗಳು ಹೊರನಾಡುಗಳೊಡನೆ ಸಂಪರ್ಕ ಕಳೆದುಕೊಂಡು ಅಂಡಮಾನ್‌ನಂತೆ ಇತ್ತು.
ಸಂಸ್ಥೆ ಬೆಳೆದು ಬಂದ ದಾರಿ : (ನಾರಾವಿ ಪ್ರೌಢಶಾಲೆಯ 50 ವರ್ಷಗಳ ಪಕ್ಷಿನೋಟ)
ನಾರಾವಿಯು ಕಾರ್ಕಳ- ಹೊಸ್ಮಾರು- ಬೆಳ್ತಂಗಡಿ ರಸ್ತೆಯ ಬದಿಯಲ್ಲಿ ಕಾರ್ಕಳ, ಮೂಡಬಿದ್ರೆ, ಬೆಳ್ತಂಗಡಿಗಳಿAದ 14 ಮೈಲು ಮತ್ತು ವೇಣೂರಿನಿಂದ 11 ಮೈಲು ಅಂತರದಲ್ಲಿರುವ ಒಂದು ಚಿಕ್ಕ ಹಳ್ಳಿ ಪಟ್ಟಣವೆನಿಸಿದೆ. ನಾರಾವಿ ಪೇಟೆಯಿಂದ ಸುಮಾರು ಒಂದುವರೆ ಮೈಲು ದೂರದಲ್ಲಿ ಸಂತ ಅಂತೋನಿ ದೇವಾಲಯವಿದೆ. ಈ ದೇವಾಲಯದ ವಠಾರದಲ್ಲಿ ಸುಮಾರು 110 ವರ್ಷಗಳಿಂದೀಚೆಗೆ ನಡೆದ ಬದಲಾವಣೆಗಳು ನಿಜವಾಗಿಯೂ ಪ್ರಶಂಸಾರ್ಹವಾಗಿವೆ. ಈ ಬದಲಾವಣೆಗಳು ಅನೇಕ ಕ್ರೈಸ್ತ ಮಿಶನರಿಗಳ ಸತತ ಪ್ರಯತ್ನದ ಫಲಗಳಾಗಿವೆ. ಈ ಬದಲಾವಣೆಗಳು ದೂರದ ಜನರನ್ನು ತನ್ನೆಡೆಗೆ ಆಕರ್ಷಿಸಲು ಕಾರಣವಾಗಿದೆ. ಸುಮಾರು 1870ರಲ್ಲಿ ನಾರಾವಿಯಲ್ಲೊಂದು ಪ್ರಾರ್ಥನಾ ಮಂದಿರ ತೆರೆಯುವುದರೊಂದಿಗೆ ಇಲ್ಲಿನ ಜನರ ಸೇವೆಯು ಆರಂಭವಾಯಿತು. ಅನಂತರ 1905ರಲ್ಲಿ ಇಲ್ಲಿಗೆ ಆಗಮಿಸಿದ ರೆ| ಫಾ| ಫಾವುಸ್ತಿನ್ ಕೋರ್ಟಿಯವರ ಸಾಧನೆ, ಸಾಹಸ, ತೀರಾ ನಿರ್ಲಕ್ಷಿತರಾದ ಹಿಂದುಳಿದ ಜನಾಂಗದವರ ಬದುಕಿಗೆ ನವಚೈತನ್ಯವನ್ನು, ಆಶಾಕಿರಣವನ್ನೂ ನೀಡಿತು. ತಮ್ಮ 21 ವರ್ಷಗಳ ಸುದೀರ್ಘ ಸೇವೆಯಿಂದ ನಾರಾವಿಯ ಚರಿತ್ರೆಯಲ್ಲಿ ಅಮರರಾಗಿ ಉಳಿದವರು ಅವರು. 1953ರಲ್ಲಿ ನಾರಾವಿ ಧರ್ಮಕ್ರೇಂದ್ರದ ಧರ್ಮಗುರುಗಳಾಗಿ ಆಗಮಿಸಿದವರು ವಂ| ಸ್ವಾಮಿ ಪಾವ್ಲ್ ಎಫ್. ಫೆರ್ನಾಂಡಿಸರು. ಫಾ| ಕೋರ್ಟಿಯವರ ಕಾಯಕವನ್ನು ಸಮರ್ಥವಾಗಿ ನಿರ್ವಹಿಸುವುದು ಫಾ| ಪಾವ್ಲ್ ಫೆರ್ನಾಂಡಿಸರವರಿಗೆ ಸಹ ಸವಾಲಾಗಿತ್ತು. ಕುಗ್ರಾಮವಾಗಿದ್ದ ಈ ಪ್ರದೇಶದ ಜನರಿಗೆ ಧಾರ್ಮಿಕ ಬೋಧನೆ ಮಾಡುವುದು ಮಾತ್ರವಲ್ಲದೆ ಅವರ ಬೌದ್ಧಿಕ ಉದ್ಧಾರವನ್ನು ಕಾಣಬೇಕಿತ್ತು. ಇದಕ್ಕೆ ಮೂಲಭೂತ ಬಂಡವಾಳವಾಗಿ ಜೀವನ ನಿರ್ವಹಣೆಗೆ ಬೇಕಾದ ಉದ್ಯೋಗ, ಮಕ್ಕಳಿಗೆ ಉತ್ತಮವಾದ ಶಿಕ್ಷಣ ಮತ್ತು ಇತರ ಸËಲಭ್ಯಗಳನ್ನು ಒದಗಿಸಲು ಪುಡಿಗಾಸು ಕೈಯಲ್ಲಿ ಇಲ್ಲದಿದ್ದರೂ ಆತ್ಮಸ್ಥೆರ್ಯ ಮತ್ತು ದೇವರಲ್ಲಿ ದೃಢ ನಂಬಿಕೆ ಅವರಿಂದ ಈ ಎಲ್ಲಾ ಕಾರ್ಯಗಳನ್ನು ಮಾಡುವಂತೆ ಮಾಡಿತು. 1961ರಲ್ಲಿ ಶಾಲೆಗೆ 6ನೇ ತರಗತಿಯನ್ನು ಒದಗಿಸಿ ಕೊಟ್ಟರು ಮಾತ್ರವಲ್ಲದೆ 7ನೇ ತರಗತಿ ಮತ್ತು ಪ್ರಾಥಮಿಕ ಶಿಕ್ಷಣಕ್ಕೆ ಹೊಸ ಕಟ್ಟಡವನ್ನು ನಿರ್ಮಿಸಿ ಕೊಟ್ಟರು. ಪ್ರಾಥಮಿಕ ಶಾಲೆ ಮುಗಿಸಿ ಮನೆಯಲ್ಲಿ ನಿರರ್ಥಕವಾಗಿ ವೇಳೆಯನ್ನು ಕಳೆಯುತ್ತಿರುವ ಮಕ್ಕಳನ್ನು ಕಂಡು ಅವರ ಭವಿಷ್ಯದ ಬಗ್ಗೆ ಪ್ರಾಮಾಣಿಕವಾಗಿ ಚಿಂತಿಸಿದಾಗ ಪ್ರೌಢಶಾಲೆಯ ಅವಶ್ಯಕತೆಯ ಅರಿವು ಅವರಿಗುಂಟಾಯಿತು. ಪ್ರೌಢಶಾಲೆಯ ಈ ಪ್ರಸ್ತಾವನೆಯನ್ನು ಅವರಿಂದ ಕೇಳಿಸಿಕೊಂಡು ಅವರ ಬೆಂಬಲಕ್ಕೆ ನಿಂತ ಊರವರ ಮಾನವ ಸಂಪನ್ಮೂಲವನ್ನು ಸಮರ್ಥವಾಗಿ ನಿರ್ವಹಿಸಿ, ಶ್ರಮದಾನ, ಮರಮಟ್ಟು ದಾನ, ಧಾನ್ಯದಾನ, ಇತ್ಯಾದಿಗಳ ಬಂಡವಾಳವೇ ಶಾಲಾ ಕಟ್ಟಡ ನಿರ್ಮಾಣದ ಭದ್ರ ಬುನಾದಿಯಾಯಿತು.


1967ರಲ್ಲಿ ಕಾರ್ಡಿನಲ್ ವಲೇರಿಯನ್ ಗ್ರೇಸಿಯಸ್ ರಿಂದ ಬುನಾದಿ ಕಲ್ಲಿರಿಸಿ ಪ್ರಾರಂಭಿಸಿದ ಶಾಲಾ ಕಟ್ಟಡ ನಿರ್ಮಾಣದ ಮಹತ್ಕಾರ್ಯವು 1969ರಲ್ಲಿ ಬೃಹತ್ ಶಾಲಾ ಕಟ್ಟಡ ತಲೆ ಎತ್ತುವುದರೊಂದಿಗೆ ಸಾಕಾರಗೊಂಡಿತು. ಇದರ ವೈಭವಪೂರ್ಣ ಉದ್ಘಾಟನೆಯು ಬೆಳ್ತಂಗಡಿ ತಾಲೂಕಿನ ಅಂದಿನ ಶಾಸಕರಾದ ಶ್ರೀ ಕೆ. ಚಿದಾನಂದರು, ಮಂಗಳೂರು ಧರ್ಮಪ್ರಾಂತ್ಯದ ಬಿಷಪ್‌ರಾದ ಅತೀ ವಂ| ಸ್ವಾಮಿ ಬಾಜಿಲ್ ಸಾಲ್ವದೋರ್ ಡಿ’ಸೋಜ ಹಾಗೂ ಸಮಸ್ತ ಗಣ್ಯರ ಸಮ್ಮುಖದಲ್ಲಿ ನೆರವೇರಿತು.
ಹೀಗೆ ದೂರದ ಊರುಗಳಿಗೆ ವಿದ್ಯಾಭ್ಯಾಸಕ್ಕೆಂದು ಹೋಗಬೇಕಿದ್ದ ವಿದ್ಯಾರ್ಥಿಗಳಿಗೆ ತಮ್ಮದೇ ಊರಿನಲ್ಲಿ ಶಿಕ್ಷಣ ಮುಂದುವರಿಸುವ ಭಾಗ್ಯವು ಲಭಿಸಿತು. ಹೈಸ್ಕೂಲು ಸ್ಥಾಪಿಸುವುದು ನನ್ನ ಕೆಲಸವಲ್ಲ, ಅದು ದೇವರ ಕೆಲಸ, ದೇವರ ಇಚ್ಛೆಯಿದ್ದರೆ ಎಲ್ಲವೂ ಸಾಧ್ಯ ಎಂಬ ವಂ| ಸ್ವಾಮಿ ಪಾವ್ಲ್ ಫೆರ್ನಾಂಡಿಸರ ಮಾತಿಗೆ ಬೆಂಬಲವಾಗಿ 1966ನೇ ಎಪ್ರಿಲ್ ತಿಂಗಳಲ್ಲಿ ನಾರಾವಿಗೆ ಆಗಮಿಸಿದ ಮಾಜಿ ಸ್ಪೀಕರ್ ದಿವಂಗತ ಶ್ರೀ ಬಿ. ವಿ. ಬಾಳಿಗರು, ಶಿಕ್ಷಣ ಇಲಾಖೆಯವರು ಹಾಗೂ ಆಡಳಿತ ಮಂಡಳಿಯವರು ಮತ್ತು ಬಿಷಪರು ನೀಡಿದ ಉತ್ತೇಜನ ಮತ್ತು ಸಹಕಾರ ವಂದನೀಯ ಸ್ವಾಮಿ ಪಾವ್ಲ್ ಫೆರ್ನಾಂಡಿಸರಿಗೆ ಪ್ರೋತ್ಸಾಹಕವಾಯಿತು. ಹೀಗೆ ನಾರಾವಿ ಪ್ರೌಢಶಾಲೆಗೆ ಮಾತ್ರವಲ್ಲದೆ ಇಡೀ ನಾರಾವಿ ಧರ್ಮಕ್ರೇಂದ್ರಕ್ಕೆ ತಮ್ಮ ಸೇವೆಯನ್ನು ನೀಡಿದ ವಂ| ಸ್ವಾಮಿ ಪಾವ್ಲ್ ಫೆರ್ನಾಂಡಿಸರು 1970 ರಲ್ಲಿ ನಾರಾವಿಯಿಂದ ಇನ್ನೊಂದು ಧರ್ಮಕೇಂದ್ರಕ್ಕೆ ತೆರಳಿದ ಬಳಿಕ ಹಲವು ಸಂಚಾಲಕರುಗಳ ಆಗಮನವನ್ನು ನಮ್ಮ ಶಾಲೆಯು ಕಂಡಿತು.

ಸಂಚಾಲಕರುಗಳಾಗಿ ತಮ್ಮ ಅಮೂಲ್ಯ ಸೇವೆಯನ್ನು ನೀಡಿದ ಧರ್ಮಗುರುಗಳ ಹೆಸರುಗಳು ಇಂತಿವೆ.
1. ವಂ| ಸ್ವಾಮಿ ತೋಮಸ್ ಡಿ’ಸೋಜ 1970-1979
2. ವಂ| ಸ್ವಾಮಿ ವಲೇರಿಯನ್ ಪಿಂಟೊ 1979-1987
3. ವಂ| ಸ್ವಾಮಿ ರೊಜಾರಿಯೊ ಫೆರ್ನಾಂಡೀಸ್ 1987-1994
4. ವಂ| ಸ್ವಾಮಿ ಫ್ರಾನ್ಸಿಸ್ ಕರ್ನೆಲಿಯೊ 1994-2001
5. ವಂ| ಸ್ವಾಮಿ ಸ್ಟಾö್ಯನಿ ರೊಡ್ರಿಗಸ್ 2001-2008
6. ವಂ| ಸ್ವಾಮಿ ಪೀಟರ್ ಫೆರ್ನಾಂಡೀಸ್ 2008-2010
7. ವಂ| ಸ್ವಾಮಿ ಲುವಿಸ್ ಕುಟಿನ್ಹಾ 2010 – 2017
8. ವಂ| ಸ್ವಾಮಿ ಸೈಮನ್ ಡಿಸೋಜಾ 2017 – 2023
9. ವಂ| ಸ್ವಾಮಿ ವಲೇರಿಯನ್ ಫೇರ್ನಾಂಡಿಸ್ 2023 – 2024
10. ವಂ| ಸ್ವಾಮಿ ಜೆರೋಮ್ ಡಿಸೋಜಾ 2024 –


ಶಾಲೆಯನ್ನು ಶೈಕ್ಷಣಿಕವಾಗಿ ವ್ಯವಸ್ಥಿತವಾಗಿ ಮುನ್ನಡೆಸಲು ನಾಯಕತ್ವ ವಹಿಸಿ ಸೇವೆಯನ್ನು ಸಲ್ಲಿಸಿರುವ ಮುಖ್ಯ ಶಿಕ್ಷಕರುಗಳ ಹೆಸರುಗಳು ಇಂತಿವೆ.
1. ಶ್ರೀಮತಿ ಮಿರಿಯಂ ಲೂವಿಸ್ 1966-1967
2. ಸಿ| ಒಲಿಂಪಿಯ ಕುಟಿನ್ಹೋ 1967-1969
3. ಸಿ| ಜಿಸೆಲ್ಲಾ ಫೆರ್ನಾಂಡೀಸ್ 1969-1973
4. ಸಿ| ಲಿಲಿಯ ಪಿಂಟೊ 1973-1978
5. ಸಿ| ಎಮ್. ಲಾವ್ರ 1978-1983
6. ಸಿ| ಗ್ರೇಸಿ ಎಮ್ ಡಿ’ ಸಿಲ್ವ 1983-1988
7. ಸಿ| ಒಲಿಂಪಿಯ ಕುಟಿನ್ಹೋ 1988-1991
8. ಸಿ| ಇಲೆಕ್ತಾ ಪಿಂಟೊ 1991-1995
9. ಸಿ| ಮೇಬಲ್ ಗೋವಿಯಸ್ 1995-2000
10. ಸಿ| ಮರ‍್ಲಿನ್ ವಾಸ್ 2000-2002
11. ಸಿ| ಮೆಟಿಲ್ಡಾ ಪಿಂಟೊ 2002-2006
12. ಶ್ರೀ ಶಿವರಾವ್ ಕೆ. (ಪ್ರಭಾರ) 2006-2007
12. ಸಿ| ಮರಿನಾ ಡಿ’ ಸೋಜ 2007-2012
13. ಸಿ| ಆಶಾ ಹೆಲೆನ್ ಪಿರೇರಾ 2012-2015
14. ಶ್ರೀಮತಿ ಲಿಡ್ವಿನ್ ಲೋಬೊ 2015
– 2023
15. ಶ್ರೀಮತಿ ಲಿಲ್ಲಿ ಪಾಯ್ಸ್ (ಪ್ರಭಾರ) 2023-2025
16. ಶ್ರೀ ಗೋಪಾಲಕೃಷ್ಣ ತುಳುಪುಳೆ (ಪ್ರಭಾರ) 2025-


ಇವರುಗಳು ಮಾತ್ರವಲ್ಲದೇ ಹಲವಾರು ಶಿಕ್ಷಕರು ಹಾಗೂ ಸ್ಥಳೀಯರ ಅಮೂಲ್ಯವಾದ ಸೇವೆಯು ನಮ್ಮ ಶಾಲೆಗೆ ಲಭಿಸಿ ಅತ್ಯುತ್ತಮ ಶೈಕ್ಷಣಿಕ ಸಾಧನೆಗೈಯಲು ಸಾಧ್ಯವಾಗಿದೆ.

Our school is the outcome of adventures of dedicated devotees of Christ who contributed the essence of their life and efforts to do good for the villagers.

The mile stones of Naravi High school will be provided upon the finalization of entire school history project. Yes, Work is under progress. We think we had to announce it before finalizing.

Please check the sub pages to get additional info.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.