ನಾರಾವಿ ಪ್ರೌಢಶಾಲೆ ನಾರಾವಿ – (ಅನುದಾನಿತ) – ವಜ್ರ ಮಹೋತ್ಸವ ಉದ್ಘಾಟನಾ ಸಮಾರಂಭ. ದಿನಾಂಕ 28-11-2025 ನೇ ಶುಕ್ರವಾರದಂದು ನಾರಾವಿ ಪ್ರೌಢಶಾಲೆ (ಅನುದಾನಿತ), ನಾರಾವಿಯ ವಜ್ರ ಮಹೋತ್ಸವ ಆಚರಣೆಗೆ ಅದ್ದೂರಿ ಚಾಲನೆ ನೀಡಲಾಯಿತು. ಕಥೋಲಿಕ್ ಶಿಕ್ಷಣ ಮಂಡಳಿಯ ಕಾರ್ಯದರ್ಶಿಗಳು ವಂ| ಸ್ವಾಮಿ| ಡಾ| ಪ್ರವೀಣ್ ಲಿಯೋ ಲಸ್ರಾದೊರವರು ಈ ಉದ್ಘಾಟನಾ ಸಮಾರಂಭದ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡು ವಜ್ರ ಮಹೋತ್ಸವದ ಲಾಂಛನವನ್ನು ಅನಾವರಣಗೊಳಿಸಿದರು. ಶ್ರೀ ರಕ್ಷಿತ್ ಶಿವರಾಂ ರವರು ದೀಪ ಬೆಳಗಿಸಿ ಈ ಕಾರ್ಯಕ್ರಮವನ್ನು ಉದ್ಘಾಟಿಸಿದರು. […]