ದಿನಾಂಕ: 15-07-2023
ನಾರಾವಿ ಪ್ರೌಢಶಾಲೆ (ಅನುದಾನಿತ), ನಾರಾವಿ ಇಲ್ಲಿ ಮಾದಕ ವಸ್ತುಗಳ ವ್ಯಸನಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಸಲುವಾಗಿ, ಪೋಲೀಸರೊಂದಿಗೆ ಸಂವಾದ ಮತ್ತು ಮಾಹಿತಿ ಕಾರ್ಯಕ್ರಮವನ್ನು ಜುಲೈ 15, 2023ರಂದು ಹಮ್ಮಿಕೊಳ್ಳಲಾಯಿತು.
ವೇಣೂರು ಪೋಲಿಸ್ ಠಾಣಾಧಿಕಾರಿ ಶ್ರೀಮತಿ ಸೌಮ್ಯ. ಜೆ. ಯವರು ಮಾದಕ ದ್ರವ್ಯ ವ್ಯಸನ ಹಾಗೂ ಸೈಬರ್ ಕ್ರೈಮ್ ಅಪರಾಧಗಳ ಬಗ್ಗೆ ಜಾಗೃತಿ ಮೂಡಿಸಿ, ವಿದ್ಯಾರ್ಥಿಗಳೊಂದಿಗೆ ಹಾಗೂ ಶಿಕ್ಷಕರೊಂದಿಗೆ ಮುಕ್ತವಾಗಿ ಸಂವಾದ ನಡೆಸಿದರು.
ಶಾಲಾ ಸಂಚಾಲಕರು ರೆ. ಫಾ. ವಲೇರಿಯನ್ ಫೆರ್ನಾಂಡಿಸ್ ಹಾಗೂ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಲಿಡ್ವಿನ್ ಲೋಬೊರವರು ಉಪಸ್ಥಿತರಿದ್ದರು. ಶ್ರೀ ಗೋಪಾಲಕೃಷ್ಣ ತುಳುಪುಳೆ-ಯವರು ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಣೆ ನಡೆಸಿದರು.