ನಾರಾವಿ ಪ್ರೌಢಶಾಲೆ, ನಾರಾವಿ – [ಅನುದಾನಿತ] – ಬೆಳ್ತಂಗಡಿ ತಾಲ್ಲೂಕು, ದ. ಕ.
ಮಕ್ಕಳಲ್ಲಿ ಪೌಷ್ಟಿಕತೆಯನ್ನು ಹೆಚ್ಚಿಸಲು ಮತ್ತು ಅಪೌಷ್ಟಿಕತೆಯನ್ನು ಹೋಗಲಾಡಿಸಲು ಅಕ್ಷರ ದಾಸೋಹ, ಕ್ಷೀರ ಭಾಗ್ಯ ದ ಜೊತೆಯಲ್ಲಿ ಮೊಟ್ಟೆಯನ್ನು ನೀಡುತಿದ್ದು, 8ನೇ ತರಗತಿಗೆ ಮಾತ್ರವಲ್ಲದೆ, ಇದೀಗ 9ನೇ ಮತ್ತು 10ನೇ ತರಗತಿಗೂ ವಿಸ್ತರಿಸಲಾಗುತಿದ್ದು, ಪ್ರಸ್ತುತ ಶಿಕ್ಷಣಿಕ ವರ್ಷದಲ್ಲಿ ಪ್ರತೀ ವಿದ್ಯಾರ್ಥಿಗೆ ಒಟ್ಟಿಗೆ 80 ಬೇಯಿಸಿದ ಮೊಟ್ಟೆಗಳನ್ನು ನೀಡಲಾಗುತ್ತದೆ. ನಮ್ಮ ಎಲ್ಲಾ ಫಲಾನುಭವಿ ವಿದ್ಯಾರ್ಥಿಗಳಿಗೆ ಅದನ್ನು ಒದಗಿಸಲಾಗಿ, ನಾರಾವಿ ಪ್ರೌಢಶಾಲೆಯಲ್ಲಿ (ಅನುದಾನಿತ) 18-08-2023ರಂದು ಸಾಂಕೇತಿಕವಾಗಿ ಉದ್ಘಾಟಿಸಿ ಚಾಲನೆ ನೀಡಲಾಯಿತು.
ಧರ್ಮಗುರುಗಳು ಹಾಗೂ ಸಂತ ಅಂತೋನಿ ಪದವಿ ಕಾಲೇಜಿನ ಪ್ರಾಂಶುಪಾಲರಾದ ವಂದನೀಯ ಡಾ|| ಆಲ್ವಿನ್ ಸೆರಾವೋ ರವರು ಮುಖ್ಯ ಅಥಿತಿಗಳಾಗಿದ್ದರು. ಮೊಟ್ಟೆಯನ್ನು ಮಕ್ಕಳ ಊಟದ ಬಟ್ಟಲಿನಲ್ಲಿ ಉಣಬಡಿಸುವ ಮೂಲಕ ಉದ್ಘಾಟಿಸಿದರು. ನಂತರ ವಿದ್ಯಾರ್ಥಿಗಳಿಗೆ ಪೌಷ್ಟಿಕತೆಯ ಬಗ್ಗೆ, ಇಂತಹ ಪೌಷ್ಟಿಕ ಯೋಜನೆಗಳ ಪ್ರಯೋಜನದ ಬಗ್ಗೆ ಮಹತ್ವಭರಿತ ಸಂದೇಶವನ್ನು ನೀಡಿದರು. ಮುಖ್ಯೋಪಾಧ್ಯಾಯಿನಿಯವರಾದ ಶ್ರೀಮತಿ ಲಿಲ್ಲಿ ಪಾಯ್ಸ್‌ರವರು ಈ ಕಾರ್ಯಕ್ರಮವನ್ನು ಆಯೋಜಿಸಿದ್ದು, ಶಿಕ್ಷಕ ವರ್ಗದವರು, MDM ಸಿಬ್ಬಂಧಿ, ಮತ್ತು ವಿದ್ಯಾರ್ಥಿಗಳ ಸಮ್ಮುಖದಲ್ಲಿ ನೆರವೇರಿಸಲಾಯಿತು. ವಿಜ್ಞಾನ ಶಿಕ್ಷಕ ಶ್ರೀ ಜಾನ್ಸನ್ ಡಿಕುನ್ಹಾರವರು ಸ್ವಾಗತಿಸಿ, ಕಾರ್ಯನಿರ್ವಹಣೆ ಮಾಡಿದರು.