Diamond Jubilee Inauguration

ನಾರಾವಿ ಪ್ರೌಢಶಾಲೆ ನಾರಾವಿ – (ಅನುದಾನಿತ) – ವಜ್ರ ಮಹೋತ್ಸವ ಉದ್ಘಾಟನಾ ಸಮಾರಂಭ.

          ದಿನಾಂಕ 28-11-2025 ನೇ ಶುಕ್ರವಾರದಂದು ನಾರಾವಿ ಪ್ರೌಢಶಾಲೆ (ಅನುದಾನಿತ), ನಾರಾವಿಯ  ವಜ್ರ ಮಹೋತ್ಸವ ಆಚರಣೆಗೆ ಅದ್ದೂರಿ ಚಾಲನೆ ನೀಡಲಾಯಿತು. ಕಥೋಲಿಕ್ ಶಿಕ್ಷಣ ಮಂಡಳಿಯ ಕಾರ್ಯದರ್ಶಿಗಳು ವಂ| ಸ್ವಾಮಿ| ಡಾ| ಪ್ರವೀಣ್ ಲಿಯೋ ಲಸ್ರಾದೊರವರು ಈ ಉದ್ಘಾಟನಾ ಸಮಾರಂಭದ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡು ವಜ್ರ ಮಹೋತ್ಸವದ ಲಾಂಛನವನ್ನು ಅನಾವರಣಗೊಳಿಸಿದರು. ಶ್ರೀ ರಕ್ಷಿತ್ ಶಿವರಾಂ ರವರು ದೀಪ ಬೆಳಗಿಸಿ ಈ ಕಾರ್ಯಕ್ರಮವನ್ನು ಉದ್ಘಾಟಿಸಿದರು.

          ಸಂತ ಅಂತೋನಿ ಶಿಕ್ಷಣ ಸಂಸ್ಥೆಗಳ ಜೊತೆ ಕಾರ್ಯದರ್ಶಿಗಳು ವಂ| ಸ್ವಾಮಿ| ಜೆರೋಮ್ ಡಿ’ಸೋಜಾ, ಮಂಗಳೂರು ಧರ್ಮಪ್ರಾಂತ್ಯದ ಸಂತ ಜೋಸೆಫರ ಗುರು ಮಹಾವಿದ್ಯಾಲಯದ ಪ್ರಾಧ್ಯಾಪಕರು ಹಾಗೂ ಪ್ರೌಢಶಾಲೆಯ ಹಳೆ ವಿದ್ಯಾರ್ಥಿ ವಂ| ಸ್ವಾಮಿ| ಜಾರ್ಜ್ ಪಿಂಟೊ, ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷರು ಶ್ರೀ ಸಂಜಯ್ ಮಿರಾಂದ , ಚರ್ಚ್ ಪಾಲನಾ ಸಮಿತಿಯ ಕಾರ್ಯದರ್ಶಿಗಳು ಶ್ರೀಮತಿ ಎವ್ಜಿನ್ ರೊಡ್ರಿಗಸ್, ಶಾಲಾ ಹಳೆ ವಿದ್ಯಾರ್ಥಿ, ಮಾಜಿ KDP ಸದಸ್ಯರು ಶ್ರೀ ಶ್ರೀನಿವಾಸ್ ಕಿಣಿ, ನಾರಾವಿ ಸಂತ ಅಂತೋನಿ ಪದವಿ ಕಾಲೇಜಿನ ಉಪನ್ಯಾಸಕರು ವಂ| ಸ್ವಾಮಿ| ರೂಪೇಶ್ ತಾವ್ರೊ, ಸಂತ ಜೆರೋಝಾ ಕಾನ್ವೆಂಟ್‌ನ ಸುಪೀರಿಯರ್ ಸಿ| ಪ್ರೆಸಿಲ್ಲಾ ಅಂದ್ರಾದೆ, ನಾರಾವಿ ಸಂತ ಅಂತೋನಿ ಪದವಿ ಕಾಲೇಜಿನ ಪ್ರಾಂಶುಪಾಲರು ಶ್ರೀ ಸಂತೋಷ್ ಸಲ್ದಾನ್ಹ, ಸಂತ ಪಾವ್ಲರ ಆಂಗ್ಲ ಮಾದ್ಯಮ ಶಾಲೆಯ ಮುಖ್ಯೋಪಾಧ್ಯಾಯರು ಶ್ರೀ ರಿಚರ್ಡ್ ಮೊರಾಸ್, ಸಂತ ಪಾವ್ಲರ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸೋಫಿಯಾ  ಫೆರ್ನಾಂಡಿಸ್, ಶಿಕ್ಷಕ- ರಕ್ಷಕ ಸಂಘದ ಸದಸ್ಯರು ಶ್ರೀ ರವಿ ಪೂಜಾರಿ, ಶ್ರೀಮತಿ ಮೋಹಿನಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಶಿಕ್ಷಕರು ಶ್ರೀ ಜಾನ್ಸನ್ ಡಿಕುನ್ಹಾರವರು ವರದಿ ಮಂಡಿಸಿದರು.  ಸರಸುಮಾರು 1000 ಸಭಿಕರಿಗೆ ಲಘು ಉಪಾಹಾರದ ವ್ಯವಸ್ಥೆ ಹಾಗೂ ಮನೋರಂಜನಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.  ಮುಖ್ಯೋಪಾಧ್ಯಾಯರಾದ ಶ್ರೀ ಗೋಪಾಲಕೃಷ್ಣ ತುಳುಪುಳೆ  ಸ್ವಾಗತಿಸಿದರು, ಶಿಕ್ಷಕಿ ಶ್ರೀಮತಿ ಸುಜಾತ ಪೂಜಾರಿ ವಂದಿಸಿದರು. ಶಿಕ್ಷಕರು ಶ್ರೀ ವಿನೋದ್ ಮೋನಿಸ್ ಕಾರ್ಯಕ್ರಮ ನಿರ್ವಹಿಸಿದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.